ಹಾಲಿನ ಸಮೃದ್ಧ ದೊರೆಯುವಿಕೆ ಮತ್ತು ಅದರ ಉತ್ಪಾದನೆ ನಮ್ಮದೇಶದ ಮಕ್ಕಳು ಹಾಗೂ ವೃದ್ಧರಿಗಾಗಿ ಅನೇಕ ಉಪಯುಕ್ತ ಉತ್ಪನ್ನಗಳು ಮತ್ತು ಸಹ-ಉತ್ಪನ್ನಗಳೆಡೆಗೆ ಕೊಂಡೊಯ್ಯಬಹುದು. ಲ್ಯಾಕ್ಟೋಸ್ ಎಂಬ ರಾಸಾಯನಿಕದ ಜಲವಿಭಜನೆಯು ಸಾರೀಕೃತ ಹಾಲು ಉತ್ಪನ್ನಗಳಲ್ಲಿ ಅದರ ಸಾಧಾರಣ ದ್ರವ್ಯತೆಯ ಸಮಸ್ಯೆಯನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೆ ಲ್ಯಾಕ್ಟೋಸ್ ರಾಸಾಯನಿಕವನ್ನು ಭರಿಸಲಾಗದ ಮಕ್ಕಳು ಮತ್ತು ವೃದ್ಧರಲ್ಲಿ ಸುಲಭ ಜೀರ್ಣ ಕ್ರಿಯೆಯನ್ನು ಇದು ಅನುವಾಗಿಸುತ್ತದೆ. == ನಿಶ್ಚಲೀಕೃತ ಕಿಣ್ವ ಕ್ರಿಯಾಕಾರಕ ವ್ಯವಸ್ಥೆ( ) == ಲ್ಯಾಕ್ಟೋಸನ್ನು ಜಲವಿಭಜನೆ ಗೊಳಿಸಲು /(ರಕ್ಷಣಾ ಆಹಾರ ಸಂಶೋಧನಾಲಯ, ಮೈಸೂರು) ಸಂಸ್ಥೆಯವರು ಒಂದು ಸುಲಭ ವೆಚ್ಚದ ಜೈವಿಕ ಕ್ರಿಯಾಕಾರಕವನ್ನು ಅಭಿವೃದ್ಧಿಗೊಳಿಸಿದ್ದಾರೆ. ಇದೊಂದು ವಿನೂತನ ಮತ್ತು ಸರಳ ವಿಧಾನವಾಗಿದ್ದು ಹಂತಹಂತವಾಗಿ ಅಥವಾ ನಿರಂತರವಾಗಿ ಇದನ್ನು ನಿರ್ವಹಿಸಬಹುದು. ಜೈವಿಕ ಉತ್ಪ್ರೇರಕವನ್ನು ಪದೇಪದೇ ಹಲವಾರು ಬಾರಿ ಬಳಕೆ ಮಾಡಿದಲ್ಲಿ ವೆಚ್ಚ-ಲಾಭದ ಪ್ರಮಾಣದಲ್ಲಿ ಗಣನೀಯ ಸುಧಾರಣೆಯನ್ನು ಕಾಣಬಹುದು. ಲ್ಯಾಕ್ಟೋಸ್ ಜಲವಿಭಜನೆಯನ್ನು ೫-೧೫ ಡಿ.ಸೆಂ ಅಥವಾ >೩೫ ಡಿ. ಸೆಂ.ನಷ್ಟು ತಾಪದಲ್ಲಿ ನಡೆಸಲಾಗುವುದು ಹೀಗಾಗಿ ಈಗ ಅಭಿವೃದ್ಧಿ ಪಡಿಸಲಾಗಿರುವ ಜೈವಿಕ ಕ್ರಿಯಾಕಾರಕದಲ್ಲಿ ಸೂಕ್ಷ್ಮಾಣು ಪ್ರದೂಷಣವನ್ನು ಗಣನೀಯವಾಗಿ ಕಡಿಮೆಗೊಳಿಸಬಹುದು. ಈ ಕ್ರಿಯಾಕಾರಕವು ನಿಶ್ಚಲೀಕರಣಗೊಂಡ ಕಿಣ್ವ/ಪೂರ್ಣ ಕೋಶ ಉತ್ಪ್ರೇರಕಗಳನ್ನು ತೀವ್ರ ಸಾಂದ್ರತೆ ಮತ್ತು ಅನುಪಾತೀಯ ನಿರ್ವಹಣಾ ತಾಪಗಳಲ್ಲಿಯೂ ಸಹ ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ. ಕಾಳು, ಅಚ್ಚು ಅಥವಾ ನಾರಿನ ರೂಪದಲ್ಲಿ ಸಿದ್ಧಪಡಿಸಿರುವ ಉತ್ಪ್ರೇರಕಗಳನ್ನೂ ಸಹ ಹಿಡಿದಿಟ್ಟುಕೊಳ್ಳಬಲ್ಲ ಸಾಮರ್ಥ್ಯವನ್ನು ಈ ಕ್ರಿಯಾಕಾರಕಗಳು ಪಡೆದಿವೆ. ಈ ಉಪಕರಣವು ನಿಶ್ಚಲೀಕೃತ ಕಿಣ್ವ ತಯಾರಿಕೆಗಳಿಗೆ ಮತ್ತು ಆವೃತ ಕುಣಿಕೆಯಲ್ಲಿನ ಲ್ಯಾಕ್ಟೋಸಿನ ಪರಿಣಾಮಕಾರಿ ಜಲವಿಭಜನೆಗಳಿಗೆ ದೀರ್ಘಕಾಲೀನ ತಾಂತ್ರಿಕ ಹಾಗೂ ಜೀವ-ರಾಸಾಯನಿಕ ಸ್ಥಿರತೆಯನ್ನು ಒದಗಿಸಬಲ್ಲದು. ಈ ವ್ಯವಸ್ಥೆಯು ಹಾಲಿನಲ್ಲಿ ೯೮% ಶುದ್ಧತೆಯ ಜಲವಿಭಜನೆಯನ್ನು ಸಾಧಿಸಿತು. ಈ ನಿರಂತರ ಪ್ರವಹನ ಜೈವಿಕ ಕ್ರಿಯಾಕಾರಕವನ್ನು ಬಳಸಿದಾಗ ಹಾಲಿನಲ್ಲಿನ ಲ್ಯಾಕ್ಟೋಸ್ ಜಲವಿಭಜನೆಯ ಆರ್ಥಿಕ ಮತ್ತು ಸಂಸ್ಕರಣ ದಕ್ಷತೆಯಲ್ಲಿ ಸುಧಾರಣೆ ಕಂಡುಬಂದಿತು. ಈ ತಂತ್ರಜ್ಞಾನವು ಆರ್ಥಿಕವಾಗಿ ಉತ್ತಮವಾಗಿದ್ದು, ಸೂಕ್ಷ್ಮಜೀವವೈಜ್ಞಾನಿಕವಾಗಿಯೂ ಸುರಕ್ಷಿತವಾಗಿದೆ.